Bengaluru, July 8: Students of class II of Rashtrotthana Vidya Kendra – Somanahalli were taken to the Art of Living as part of an educational tour.
• First, Sri Sri Goshala was visited.
• There were about 1600 cows there, out of which the children saw 19 different breeds of cows. The Gir breed of cows from Gujarat especially caught the attention of the children. Information was given about the importance of these cows and the nutritional value of their milk. The children were also told about the fact that Lord Krishna used to graze cows in the Puranas.
• Then the Gurukul was visited. There, the children observed the disciplined way in which the student’s received education and the traditional lifestyle.
• During the tour, Panchalinga Darshan, Panchamukhi Ganapati and Devi were seen. Then they visited the beautiful Meenakshi Temple and learned about its features.
• Along with this, the children were introduced to the importance of our traditional games by playing indigenous games.
• Then, they visited the meditation hall and meditated for about 15 minutes.
After the meditation, the children were given a discourse on good manners, discipline, concentration and human values.
ಬೆಂಗಳೂರು, ಜು. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸದ ಅಂಗವಾಗಿ ಆರ್ಟ್ ಆಫ್ ಲಿವಿಂಗ್ಗೆ ಕರೆದೊಯ್ಯಲಾಯಿತು.
• ಮೊದಲಿಗೆ ಶ್ರೀ ಶ್ರೀ ಗೋಶಾಲೆಯನ್ನು ವೀಕ್ಷಿಸಲಾಯಿತು.
• ಅಲ್ಲಿ ಸುಮಾರು 1600 ಹಸುಗಳು ಇದ್ದು, ಅವುಗಳಲ್ಲಿ 19 ವಿವಿಧ ತಳಿಯ ಹಸುಗಳನ್ನು ಮಕ್ಕಳು ನೋಡಿದರು. ವಿಶೇಷವಾಗಿ ಗುಜರಾತಿನ ಗಿರ್ ತಳಿಯ ಹಸುಗಳು ಮಕ್ಕಳ ಗಮನ ಸೆಳೆದವು. ಈ ಹಸುಗಳ ಮಹತ್ವ ಹಾಗೂ ಅವುಗಳ ಹಾಲಿನ ಪೌಷ್ಟಿಕತೆಯ ಕುರಿತು ಮಾಹಿತಿಯನ್ನು ನೀಡಲಾಯಿತು. ಪುರಾಣಗಳಲ್ಲಿ ಶ್ರೀಕೃಷ್ಣ ಪರಮಾತ್ಮನು ಗೋವುಗಳನ್ನು ಮೇಯಿಸುತ್ತಿದ್ದ ವಿಚಾರವನ್ನೂ ಮಕ್ಕಳಿಗೆ ತಿಳಿಸಲಾಯಿತು.
• ನಂತರ ಗುರುಕುಲವನ್ನು ವೀಕ್ಷಿಸಲಾಯಿತು. ಅಲ್ಲಿ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಶಿಕ್ಷಣ ಪಡೆಯುವ ವಿಧಾನ ಹಾಗೂ ಸಂಪ್ರದಾಯಬದ್ಧ ಜೀವನಶೈಲಿಯನ್ನು ಮಕ್ಕಳು ಗಮನಿಸಿದರು.
• ಪ್ರವಾಸದ ವೇಳೆ ಪಂಚಲಿಂಗ ದರ್ಶನ, ಪಂಚಮುಖಿ ಗಣಪತಿ ಹಾಗೂ ದೇವಿಯ ದರ್ಶನವನ್ನು ಮಾಡಲಾಯಿತು. ನಂತರ ಸುಂದರವಾದ ಮೀನಾಕ್ಷಿ ಮಂದಿರವನ್ನು ವೀಕ್ಷಿಸಿ ಅದರ ವೈಶಿಷ್ಟ್ಯವನ್ನು ತಿಳಿದುಕೊಂಡರು.
• ಇದರೊಂದಿಗೆ ಮಕ್ಕಳಿಗೆ ದೇಶೀಯ ಆಟಗಳನ್ನು ಆಡಿಸಿ ನಮ್ಮ ಸಾಂಪ್ರದಾಯಿಕ ಆಟಗಳ ಮಹತ್ವವನ್ನು ಪರಿಚಯಿಸಲಾಯಿತು.
• ಬಳಿಕ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ಸುಮಾರು 15 ನಿಮಿಷಗಳ ಕಾಲ ಧ್ಯಾನ ಮಾಡಿಸಲಾಯಿತು.
• ಧ್ಯಾನದ ನಂತರ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಸ್ತು, ಏಕಾಗ್ರತೆ ಹಾಗೂ ಮಾನವೀಯ ಮೌಲ್ಯಗಳ ಕುರಿತು ಪ್ರವಚನ ನೀಡಲಾಯಿತು.











