Temple visit for cultural and spiritual education by RVK – Somanahalli

Bengaluru, Aug 5: A trip to Trimurti Adhyatma Mandir was organized for Gokulam students of Rashtrotthana Vidya Kendra – Somanahalli.The teachers and other staff members accompanied them on this trip.The children were welcomed by the priests of the temple and gave a brief introduction of the importance of the temple. Children visited the main part of the temple. Learn about symbols, statues and rituals in simple form.The trip was successful in imparting cultural and spiritual education to the children. It helped the children in physical activity, social interaction and knowledge enhancement. Children actively participated in this little trip organized for them and made their day meaningful.

ಬೆಂಗಳೂರು, ಆಗಸ್ಟ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗೋಕುಲಂ ವಿದ್ಯಾರ್ಥಿಗಳಿಗಾಗಿ ತ್ರಿಮೂರ್ತಿ ಆಧ್ಯಾತ್ಮ ಮಂದಿರಕ್ಕೆ ಪ್ರವಾಸವನ್ನು ಆಯೋಜಿಸಲಾಗಿತ್ತು.ಈ ಪ್ರವಾಸದಲ್ಲಿ ಶಿಕ್ಷಕರು ಮತ್ತು ಉಳಿದ ಸಿಬ್ಬಂದಿಗಳು ಜೊತೆಯಾಗಿದ್ದರು.ಮಕ್ಕಳನ್ನು ಮಂದಿರದ ಪೂಜಾರಿಗಳು ಸ್ವಾಗತಿಸಿದರು. ಹಾಗೂ ಮಂದಿರದ ಪ್ರಾಮುಖ್ಯತೆಯ ಸಂಕ್ಷಿಪ್ತ ಪರಿಚಯವನ್ನು ಮಾಡಿಸಿದರು. ಮಕ್ಕಳು ದೇವಾಲಯದ ಮುಖ್ಯ ಭಾಗವನ್ನು ಸಂದರ್ಶಿದರು. ಚಿಹ್ನೆಗಳು, ಪ್ರತಿಮೆಗಳು ಮತ್ತು ಆಚರಣೆಗಳ ಬಗ್ಗೆ ಸರಳ ರೂಪದಲ್ಲಿ ತಿಳಿದುಕೊಂಡರು.ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವಲ್ಲಿ ಈ ಪ್ರವಾಸವು ಯಶಸ್ವಿಯಾಯಿತು. ಮಕ್ಕಳಿಗೆ ದೈಹಿಕ ಚಟುವಟಿಕೆ, ಸಾಮಾಜಿಕವಾಗಿ ಬೆರೆತುಕೊಳ್ಳುವುದು ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಯಿತು. ಮಕ್ಕಳು ತಮಗಾಗಿ ಆಯೋಜಿಸಿದ ಈ ಪುಟ್ಟ ಪ್ರವಾಸದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ತಮ್ಮ ದಿನವನ್ನು ಅರ್ಥಪೂರ್ಣವಾಗಿಸಿಕೊಂಡರು.

Scroll to Top