Bengaluru, Sept 5: Teacher’s Day was celebrated herein Rashtrotthana Vidya Kendra – Somanahalli.
ಬೆಂಗಳೂರು, ಸಪ್ಟೆಂಬರ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳು ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಕಿರುಪರಿಚಯವನ್ನು ಮಾಡಿದರು. ಬಳಿಕ ಶಿಕ್ಷಕರ ಕುರಿತು ಹಾಡನ್ನು ಹಾಡಿದರು ಹಾಗೂ ನೃತ್ಯದ ಮೂಲಕ ಶಿಕ್ಷಕರ ಭಾವವನ್ನು ತೋರಿಸಿದರು.ವಿದ್ಯಾರ್ಥಿಗಳು ಶಿಕ್ಷಕರನ್ನು ಕುರಿತು ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿ ಶಿಕ್ಷಕರ ಬಗ್ಗೆ ಚುಟುಕುಗಳನ್ನು ಬರೆದು ಎಲ್ಲ ಶಿಕ್ಷಕರಿಗೂ ಶುಭಾಶಯವನ್ನು ತಿಳಿಸಿದರು ಹಾಗೂ ಎಂದು ಹೇಳಿ ಶಿಕ್ಷಕೇತರ ಸಿಬ್ಬಂದಿಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಹೇಳುವುದರ ಮೂಲಕ ಧನ್ಯವಾದಗಳು ಕೋರಿದರು. ನಂತರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬನಶಂಕರಿಯಲ್ಲಿ ಎಲ್ಲ ಶಿಕ್ಷಕರು ಸೇರಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಕೆ ಸುಚೇಂದ್ರ ಪ್ರಸಾದ್ ಅವರು ಆಗಮಿಸಿದ್ದರು.ಎಲ್ಲ ಶಿಕ್ಷಕರಿಗೂ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಿಕ್ಷಕರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.“ಪಾಠ ಮಾಡುವವರು ಮಾತ್ರ ಗುರುವಲ್ಲ, ನಮ್ಮ ದಿನನಿತ್ಯ ಜೀವನದಲ್ಲಿ ಜೀವನದ ಪಾಠವನ್ನು ಹೇಳುವವರು ಕೂಡ ಗುರುಗಳು” – ವಿದ್ಯಾರ್ಥಿಗಳು, ರಾ.ವಿ.ಕೆ. ಸೋಮನಹಳ್ಳಿ