Bengaluru, Dec. 29: World Human Day was celebrated as part of the birth anniversary of Rashtrakavi Kuvempu herein Rashtrotthana Vidya Kendra -Somanahalli. Speaking on the occasion, Smt. Asha explained the universal message that everyone is human first, regardless of caste, religion, language, or culture. Humanity, love, compassion, respect, and environmental protection should be a part of our lives. Remembering the message of Indian culture, “Vasudaiva Kutumbakam,” she said that the world should be developed as a family. He said that good words, a helpful attitude, showing humanity, and giving up plastic should protect the environment. She said that love, peace, and friendship – these are our real strengths.

ಬೆಂಗಳೂರು, ಡಿ. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀಮತಿ ಆಶಾ ಅವರು ಮಾತನಾಡಿ, ಜಾತಿ, ಧರ್ಮ, ಭಾಷೆ, ಸಂಸ್ಕೃತಿ ಭೇದವಿಲ್ಲದೆ ಎಲ್ಲರೂ ಮೊದಲು ಮಾನವರು ಎಂಬ ವಿಶ್ವಮಾನವ ಸಂದೇಶವನ್ನು ವಿವರಿಸಿದರು. ಮಾನವೀಯತೆ, ಪ್ರೀತಿ, ಸಹಾನುಭೂತಿ, ಗೌರವ ಹಾಗೂ ಪರಿಸರ ಸಂರಕ್ಷಣೆ ನಮ್ಮ ಜೀವನದ ಭಾಗವಾಗಬೇಕು. ಭಾರತೀಯ ಸಂಸ್ಕೃತಿಯ “ವಸುದೈವ ಕುಟುಂಬಕಂ” ಎಂಬ ಸಂದೇಶವನ್ನು ನೆನಪಿಸಿಕೊಂಡು, ಜಗತ್ತು ಒಂದು ಕುಟುಂಬ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಒಳ್ಳೆಯ ಮಾತು, ಸಹಾಯದ ಮನೋಭಾವ, ಮಾನವೀಯತೆ ತೋರಿಸುವುದು ಹಾಗೂ ಪ್ಲಾಸ್ಟಿಕ್ ತ್ಯಜಿಸಿ ಪರಿಸರವನ್ನು ಕಾಪಾಡಬೇಕು ಎಂದರು. ಪ್ರೀತಿ, ಶಾಂತಿ, ಸ್ನೇಹ – ಇವೆ ನಮ್ಮ ನಿಜವಾದ ಬಲ ಎಂದು ತಿಳಿಸಿದರು.