Bengaluru, Feb. 12: Matrubhasha Day was celebrated herein Rashtrotthana Vidya Kendra – Somanahalli. This program was jointly organized by Kannada, Sanskrit and Hindi language teachers.The students explained the importance of Mother Language in all three languages and clarified that Mother Language plays an important role in building a person’s personality, thinking and preserving culture. Stories, songs and various trilingual activities were performed by the students. Teachers, parents and staff participated enthusiastically in these activities.

ಬೆಂಗಳೂರು, ಫೆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಮಾತೃಭಾಷಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷಾ ಶಿಕ್ಷಕರು ಸಂಯುಕ್ತವಾಗಿ ಆಯೋಜಿಸಿದ್ದರು. ವಿದ್ಯಾರ್ಥಿಗಳು ಮೂರು ಭಾಷೆಗಳಲ್ಲಿಯೂ ಮಾತೃಭಾಷೆಯ ಪ್ರಾಮುಖ್ಯತೆಯನ್ನು ವಿವರಿಸಿ, ತಾಯಿಭಾಷೆಯು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ, ಚಿಂತನೆ ಹಾಗೂ ಸಂಸ್ಕೃತಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು. ವಿದ್ಯಾರ್ಥಿಗಳಿಂದ ಕಥೆ, ಹಾಡು ಹಾಗೂ ವಿವಿಧ ತ್ರಿಭಾಷಾ ಚಟುವಟಿಕೆಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳಲ್ಲಿ ಶಿಕ್ಷಕರು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಭಾಗವಹಿಸಿದರು.