Parent Orientation Program @ RVK – Somanahalli

Bengaluru, June 15:A Parent Orientation Program was conducted from Grade 3 to Grade 6 at Rashtrotthana Vidya Kendra-Somanahalli.It was a good time to understand the mission, vision, value and objectives of Rashtrotthana Parishat Schools. During the session, it was emphasized that children need strong roots to grow and strong wings to fly. The school’s annual framework and policies were discussed to offer parents a more comprehensive view of their children’s educational trajectory.

During the concluding segment of the session, an opportunity was provided to the parents to offer guidance and seek clarification by posing any queries they may have had. The session was skillfully conducted by Pradhanacharya, Smt. Ramya Suhas Udupa. The program provides parents with the assurance that their children are receiving a firm grounding and the necessary skills to succeed. By fostering a collaborative partnership between parents and the school, we can ensure a secure future for the children.

ಬೆಂಗಳೂರು, ಜೂನ್ 15:ರಾಷ್ಟ್ರೋತ್ಥಾನ ವಿದ್ಯಾಕೇಂದ್ರ-ಸೋಮನಹಳ್ಳಿಯಲ್ಲಿ 3 ರಿಂದ 6ನೇ ತರಗತಿಯ ಮಕ್ಕಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು. ರಾಷ್ಟ್ರೋತ್ಥಾನ ಪರಿಷತ್ ಶಾಲೆಗಳ ಕಾರ್ಯಚಟುವಟಿಕೆ, ದೃಷ್ಟಿಕೋನ, ಮೌಲ್ಯ ಮತ್ತು ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದೊಂದು ಸುಸಮಯವಾಗಿತ್ತು. ಸಭೆಯಲ್ಲಿ ಮಕ್ಕಳಿಗೆ ಬೆಳೆಯಲು ಬಲವಾದ ಬೇರು,ಹಾರಲು ಬಲವಾದ ರೆಕ್ಕೆ ಬೇಕು ಎನ್ನುವುದನ್ನು ಮನದಟ್ಟು ಮಾಡುವುದಕ್ಕೆ ಒತ್ತು ನೀಡಲಾಯಿತು.ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಮಾರ್ಗದ ಉತ್ತಮ ಒಳನೋಟವನ್ನು ತಿಳಿದುಕೊಳ್ಳಲಿಕ್ಕಾಗಿ ಶಾಲೆಯ ವಾರ್ಷಿಕ ಚೌಕಟ್ಟು ಹಾಗೂ ನೀತಿನಿಯಮಗಳನ್ನು ಚರ್ಚಿಸಲಾಯಿತು.

ಸಭೆಯ ಕೊನೆಯಲ್ಲಿ ಪಾಲಕರಿಗೆ ಸಲಹೆ ನೀಡಲು ಹಾಗೂ ಸಂಶಯವಿದ್ದಲ್ಲಿ ವಿಚಾರಿಸಲು ಸಮಯ ನೀಡಲಾಯಿತು. ಪ್ರಧಾನಾಚಾರ್ಯೆ, ಶ್ರೀಮತಿ ರಮ್ಯಾ ಸುಹಾಸ್ ಉಡುಪ ಅವರು ಈ ಅವಧಿಯನ್ನು ನಡೆಸಿಕೊಟ್ಟರು.ಪಾಲಕರಿಗೆ ತಮ್ಮ ಮಕ್ಕಳಿಗೆ ಭದ್ರ ಬುನಾದಿ,ಹಾರಲು ಬಲವಾದ ರೆಕ್ಕೆ ಇಲ್ಲಿ ನೀಡಲಾಗುತ್ತಿದೆ ಎನ್ನುವುದನ್ನು ಕಾರ್ಯಕ್ರಮ ಖಚಿತಪಡಿಸಿತು. ಪಾಲಕರು ಮತ್ತು ಶಾಲೆ ಇಬ್ಬರೂ ಕೈಜೋಡಿಸಿದರೆ ಮಕ್ಕಳ ಭವಿಷ್ಯ ಸುಭದ್ರವಾಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಕಂಡುಕೊಳ್ಳಲಾಯಿತು.

Scroll to Top