Kittur Rani Chennamma Jayanti in RVK – Somanahalli

Bengaluru, October 23: Kittur Rani Chennamma Jayanti was celebrated herein Rashtrotthana Vidya Kendra – Somanahalli.The Principal Smt. Ramya inaugurated the program by garlanding the portrait of Kittur Rani Chennamma. Music teacher Subbalakshmi sang a song about Rani Chennamma’s life story and struggle. A Kannada teacher acted out a dialogue in which the British went to the court of Kittur Rani Chennamma and asked them to pay tribute. More information about Kittur Rani Chennamma was conveyed through a visual display.

ಬೆಂಗಳೂರು, ಅಕ್ಟೋಬರ್ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಕಿತ್ತೂರು ರಾನಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯಾ ಅವರು ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ರಾಣಿ ಚೆನ್ನಮ್ಮನವರ ಜೀವನ ಚರಿತ್ರೆ ಹಾಗೂ ಹೋರಾಟವನ್ನು ಕುರಿತು ಸಂಗೀತ ಶಿಕ್ಷಕಿ ಸುಬ್ಬಲಕ್ಷ್ಮಿ ಅವರು ಹಾಡನ್ನು ಹಾಡಿದರು. ಕನ್ನಡ ಶಿಕ್ಷಕರಿಂದ ಬ್ರಿಟಿಷರು ಕಿತ್ತೂರು ರಾಣಿ ಚೆನ್ನಮ್ಮ ನವರ ಆಸ್ಥಾನಕ್ಕೆ ಹೋಗಿ ಸುಂಕ ಕಟ್ಟುವಂತೆ ಕೇಳಿಕೊಳ್ಳುವ ಸಂಭಾಷಣೆಯನ್ನು ನಟನೆಯ ಮೂಲಕ ತೋರಿದರು. ಕಿತ್ತೂರು ರಾಣಿ ಚೆನ್ನಮ್ಮ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೃಶ್ಯ ಪ್ರದರ್ಶನ ತೋರುವುದರ ಮೂಲಕ ತಿಳಿಸಿಕೊಡಲಾಯಿತು.

Scroll to Top