Bengaluru, Feb. 6: A field trip was organized for the children of class 1 herein Rashtrotthana Vidya Kendra – Somanahalli to Ragigudda Temple and Kaggalipur Public Park. The surrounding environment was observed at Ragigudda Temple. They learned the etiquette of conduct in public religious places. They observed various plants, trees, flowers and birds at Kaggalipur Public Park. They walking and playing in the lap of nature and learned about keeping the environment clean and green. Teachers explained the importance of trees, fresh air, and public property care in a simple and interactive way. Various types of games were organized at the park.
ಬೆಂಗಳೂರು, ಫೆ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ 1ನೇ ತರಗತಿಯ ಮಕ್ಕಳಿಗಾಗಿ ರಾಗಿಗುಡ್ಡ ದೇವಸ್ಥಾನ ಹಾಗೂ ಕಗ್ಗಲೀಪುರ ಸಾರ್ವಜನಿಕ ಉದ್ಯಾನವನಕ್ಕೆ ಕ್ಷೇತ್ರ ಪ್ರವಾಸ ಏರ್ಪಡಿಸಲಾಗಿತ್ತು. ರಾಗಿಗುಡ್ಡ ದೇವಸ್ಥಾನದಲ್ಲಿ ಸುತ್ತಲಿನ ಪರಿಸರವನ್ನು ವೀಕ್ಷಿಸಲಾಯಿತು. ಸಾರ್ವಜನಿಕ ಧಾರ್ಮಿಕ ಸ್ಥಳಗಳಲ್ಲಿ ನಡೆದುಕೊಳ್ಳಬೇಕಾದ ರೀತಿನೀತಿಗಳನ್ನು ಕಲಿತುಕೊಂಡರು. ಕಗ್ಗಲೀಪುರ ಸಾರ್ವಜನಿಕ ಉದ್ಯಾನವನದಲ್ಲಿ ಬಗೆಬಗೆಯ ಸಸ್ಯಗಳು, ಮರಗಳು, ಹೂವುಗಳು ಹಾಗೂ ಪಕ್ಷಿಗಳನ್ನು ವೀಕ್ಷಿಸಿದರು. ಪ್ರಕೃತಿಯ ಮಡಿಲಲ್ಲಿ ಅಡ್ಡಾಡಿದರು, ಆಡಿದರು. ಪರಿಸರವನ್ನು ಸ್ವಚ್ಛವಾಗಿ ಹಸಿರಾಗಿ ಇಡುವುದರ ಬಗ್ಗೆ ಕಲಿತರು.ಶಿಕ್ಷಕರು ಮರಗಳ, ಸ್ವಚ್ಛ ಗಾಳಿ, ಸಾರ್ವಜನಿಕ ಆಸ್ತಿಯ ಕಾಳಜಿಯ ಕುರಿತು ಸಂವಾದದ ರೂಪದಲ್ಲಿ ಕಲಿಸಿದರು. ಪಾರ್ಕ ನಲ್ಲಿ ವಿವಿಧ ಬಗೆಯ ಆಟಗಳನ್ನು ಆಯೋಜಿಸಲಾಯಿತು.











