Bengaluru, Dec. 10: Flower Day was celebrated herein Rashtrotthana Vidya Kendra – Somanahalli.
Students brought various types of flowers from home and the programs started with class-wise group activities. The children showed their creativity. After the flower arrangement, verses and rhymes were recited showing the importance of flowers in nature and our culture. The students had created a flower garden, a botanical garden, and a map of Karnataka. In addition, they drew a picture of the rowan tree Thimmakka.

ಬೆಂಗಳೂರು, ಡಿ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹೂವುಗಳ ದಿನಾಚರಣೆಯನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳು ಮನೆಯಿಂದ ವಿವಿಧ ಬಗೆಯ ಹೂವುಗಳನ್ನು ತಂದಿದ್ದು, ತರಗತಿವಾರು ಗುಂಪು ಚಟುವಟಿಕೆಯಿಂದ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಮಕ್ಕಳು ತಮ್ಮ ಸೃಜನಶೀಲತೆಯನ್ನು ಮೆರೆದರು. ಪುಷ್ಪಾರ್ಚನೆಯ ಬಳಿಕ ಪ್ರಕೃತಿ ಮತ್ತು ನಮ್ಮ ಸಂಸ್ಕೃತಿಯಲ್ಲಿ ಹೂವುಗಳ ಮಹತ್ತ್ವವನ್ನು ತೋರಿಸುವ ಶ್ಲೋಕಗಳು ಮತ್ತು ಪ್ರಾಸಗಳ ಪಠಣವನ್ನು ಮಾಡಲಾಯಿತು. ವಿದ್ಯಾರ್ಥಿಗಳು ಹೂವಿನ ಉದ್ಯಾನ, ಸಸ್ಯೋದ್ಯಾನ, ಕರ್ನಾಟಕ ನಕ್ಷೆಯನ್ನು ರೂಪಿಸಿದ್ದರು. ಜೊತೆಗೆ ಸಾಲುಮರದ ತಿಮ್ಮಕ್ಕ ಅವರ ಚಿತ್ರವನ್ನು ಚಿತ್ರಿಸಿದ್ದು ವಿಶೇಷವಾಗಿತ್ತು.