Bengaluru, Feb. 10: Students of class 2 of Rashtrotthana Vidya Kendra – Somanahalli went on an educational trip to Venkateshwara Swamy Temple, Kallahalli and Rashtrotthana Mudenahalli Goshala. They prayed at the temple and viewed the surrounding environment. Then they visited Rashtrotthana Goshala. They fed the cows there. They cleaned the Goshala. They learned all the details about how cows are taken care of and how useful they are for us. They played in a nearby grove and celebrated with a Kannada song while riding a bullock cart.
ಬೆಂಗಳೂರು, ಫೆ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ 2ನೇ ತರಗತಿಯ ವಿದ್ಯಾರ್ಥಿಗಳು ವೆಂಕಟೇಶ್ವರ ಸ್ವಾಮಿ ದೇವಾಲಯ, ಕಲ್ಲಹಳ್ಳಿಗೆ ಹಾಗೂ ರಾಷ್ಟ್ರೋತ್ಥಾನ ಮೂಡೇನಹಳ್ಳಿ ಗೋಶಾಲೆಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದರು. ದೇವಾಲಯದಲ್ಲಿ ಪ್ರಾರ್ಥನೆ ಮಾಡಿ ಸುತ್ತಲಿನ ಪರಿಸರವನ್ನು ವೀಕ್ಷಿಸಿದರು. ಬಳಿಕ ರಾಷ್ಟ್ರೋತ್ಥಾನ ಗೋಶಾಲೆಗೆ ಭೇಟಿ ನೀಡಿದರು. ಅಲ್ಲಿ ಹಸುಗಳಿಗೆ ಆಹಾರ ನೀಡಿದರು. ಗೋಶಾಲೆಯನ್ನು ಸ್ವಚ್ಛಗೊಳಿಸಿದರು. ಹಸುಗಳ ಆರೈಕೆ ಹೇಗೆ ಮಾಡುತ್ತಾರೆ, ಅವು ನಮಗೆ ಎಷ್ಟು ಉಪಯುಕ್ತ ಎನ್ನುವ ವಿವರಗಳನ್ನೆಲ್ಲ ತಿಳಿದುಕೊಂಡರು. ಹತ್ತಿರದ ತೋಪಿನಲ್ಲಿ ಆಟವಾಡಿ, ಎತ್ತಿನ ಗಾಡಿ ಸವಾರಿಯಲ್ಲಿ ಕನ್ನಡ ಹಾಡಿನೊಂದಿಗೆ ಸಂಭ್ರಮಿಸಿದರು.











