Bengaluru, Mar. 7: A Chandana program was organized herein Rashtrotthana Vidya Kendra – Somanahalli, And students, teachers and family members participated. Speaking at the program, Prabhodan Prant Toli member Sri Satish said, “To instil good morals in children, there should be a moral atmosphere at home as well as at school. The role of parents in the development of children is very important.” Everyone enjoyed the moonlit meal together. Shakha games were organized, and children and elders participated enthusiastically. Cultural programs were held by the students. The play ‘Balidana’ was performed by the children. The students performed a tribute dance on the occasion of the completion of 150 years of ‘Vande Mataram’.
ಬೆಂಗಳೂರು, ಮಾ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಚಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಭೋದನ ಪ್ರಾಂತ ಟೋಲಿ ಸದಸ್ಯರಾದ ಶ್ರೀ ಸತೀಶ್ ಅವರು “ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳು ಬೆಳೆಸಲು ಶಾಲೆಯ ಜೊತೆಗೆ ಮನೆಯಲ್ಲಿಯೂ ಸಂಸ್ಕಾರ ವಾತಾವರಣ ಇರಬೇಕು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದು” ಎಂದು ತಿಳಿಸಿದರು. ಎಲ್ಲರೂ ಸೇರಿ ಬೆಳದಿಂಗಳ ಊಟವನ್ನು ಸವಿದರು. ಶಾಖೆಯ ಆಟಗಳು ಆಯೋಜಿಸಲ್ಪಟ್ಟು, ಮಕ್ಕಳು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಕ್ಕಳಿಂದ ʼಬಲಿದಾನʼ ನಾಟಕ ಪ್ರದರ್ಶಿಸಲ್ಪಟ್ಟಿತು. ʼವಂದೇ ಮಾತರಂʼಗೆ 150 ವರ್ಷಗಳು ಪೂರ್ತಿಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಟ್ರಿಬ್ಯೂಟ್ ಡ್ಯಾನ್ಸ್ ಪ್ರದರ್ಶನ ನೀಡಿದರು.






















