Bengaluru, Aug. 27: The Rakshabandhan program was celebrated at Rashtrotthana Vidya Kendra – Somanahalli.

  • Students sang a beautiful and melodious song that conveyed the importance of Rakshabandhan.
  • Teachers, non-teaching staff and all the students sat together and recited the Raksha Mantra.
  • After the chanting of the mantra, they expressed the feeling of brotherhood, love, friendship, trust and mutual protection by tying Rakshabandhan to each other.
  • As part of Rakshabandhan, the students of our school visited G.H.P. School, Harohalli, A.P.S. Police Station, Harohalli, Kasturiba CBSE School, Harohalli, Mahatma PU College, Harohalli, A.P.S. Polytechnic College, Somanahalli, Arakas Police Station, Kaggalipur, Government Hospital, Kaggalipur and Dayanand Sagar University in a social outreach program.
  • Students tied Raksha Bandhan to the teachers, students, staff, police officers and medical staff there and told them about the importance of Raksha Bandhan.
  • On this occasion, they also visited the toll centre in Somanahalli and tied Raksha Bandhan to the staff there. The importance of Raksha Bandhan was explained, and sweets were distributed to everyone.

 

ಬೆಂಗಳೂರು, ಆ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

  • ವಿದ್ಯಾರ್ಥಿಗಳು ರಕ್ಷಾಬಂಧನದ ಮಹತ್ವವನ್ನು ಸಾರುವ ಸುಂದರ ಹಾಗೂ ಸುಮಧುರ ಗೀತೆಯನ್ನು ಹಾಡಿದರು.
  • ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಒಟ್ಟಾಗಿ ಕುಳಿತು ರಕ್ಷೆಯ ಮಂತ್ರವನ್ನು ಪಠಿಸಿದರು.
  • ಮಂತ್ರಪಠಣದ ನಂತರ ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ಸಹೋದರತ್ವ, ಪ್ರೀತಿ, ಸ್ನೇಹ, ವಿಶ್ವಾಸ ಹಾಗೂ ಪರಸ್ಪರ ರಕ್ಷಣೆಯ ಭಾವನೆಯನ್ನು ವ್ಯಕ್ತಪಡಿಸಿದರು.
  • ರಕ್ಷಾಬಂಧನದ ಅಂಗವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಸಮಾಜ ಸಂಪರ್ಕ ಕಾರ್ಯಕ್ರಮದಲ್ಲಿ ಜಿ.ಹೆಚ್.ಪಿ. ಶಾಲೆ, ಹಾರೋಹಳ್ಳಿ, ಎ.ಪಿ.ಎಸ್. ಪೊಲೀಸ್ ಠಾಣೆ, ಹಾರೋಹಳ್ಳಿ, ಕಸ್ತೂರಿಬಾ ಸಿಬಿಎಸ್‌ಇ ಶಾಲೆ, ಹಾರೋಹಳ್ಳಿ, ಮಹಾತ್ಮ ಪಿಯು ಕಾಲೇಜು, ಹಾರೋಹಳ್ಳಿ, ಎ.ಪಿ.ಎಸ್. ಪಾಲಿಟೆಕ್ನಿಕ್ ಕಾಲೇಜು, ಸೋಮನಹಳ್ಳಿ, ಆರಕ್ಷಕ ಪೊಲೀಸ್ ಠಾಣೆ, ಕಗ್ಗಲಿಪುರ, ಸರ್ಕಾರಿ ಆಸ್ಪತ್ರೆ, ಕಗ್ಗಲಿಪುರ ಹಾಗೂ ದಯಾನಂದ ಸಾಗರ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿದರು.
  • ವಿದ್ಯಾರ್ಥಿಗಳು ಅಲ್ಲಿನ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ ರಕ್ಷೆಯನ್ನು ಕಟ್ಟಿ, ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು. 
  • ಇದೇ ಸಂದರ್ಭದಲ್ಲಿ ಸೋಮನಹಳ್ಳಿಯ ಟೋಲ್ ಕೇಂದ್ರಕ್ಕೂ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ರಕ್ಷೆಯನ್ನು ಕಟ್ಟಲಾಯಿತು. ರಕ್ಷಾಬಂಧನದ ಮಹತ್ವವನ್ನು ತಿಳಿಸಿ, ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.