Bengaluru, Aug. 12: National Librarians Day and Vikram Sarabhai Jayanti were celebrated at Rashtrotthana Vidya Kendra – Somanahalli.
- Students were informed about the life, personality, and scientific achievements of Dr. Vikram Sarabhai, the father of India’s space program, and his significant contributions to the development of India’s space sector.
- A visual media introducing his life and achievements was displayed.
- Students spoke at length about the life and achievements of Dr. Vikram Sarabhai.
- The importance of National Librarians Day, which is celebrated to commemorate the birth anniversary of Dr. S. R. Ranganathan, the father of library science in India, was explained to the students. *The use of libraries, the importance of books and the need to inculcate the habit of reading among students were explained.
- Information was given through visual media about the life of Dr. Ranganathan and his valuable contributions to the library sector in India.
ಬೆಂಗಳೂರು, ಆ. 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಹಾಗೂ ವಿಕ್ರಂ ಸಾರಾಭಾಯಿ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹರಾದ ಡಾ. ವಿಕ್ರಂ ಸಾರಾಭಾಯಿ ಅವರ ಜೀವನ, ವ್ಯಕ್ತಿತ್ವ, ವೈಜ್ಞಾನಿಕ ಸಾಧನೆಗಳು ಹಾಗೂ ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಮಹತ್ವದ ಕೊಡುಗೆಗಳ ಕುರಿತು ಮಾಹಿತಿ ನೀಡಲಾಯಿತು.
- ಅವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು.
- ವಿದ್ಯಾರ್ಥಿಗಳು ಡಾ. ವಿಕ್ರಂ ಸಾರಾಭಾಯಿ ಅವರ ಜೀವನ ಮತ್ತು ಸಾಧನೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
- ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸುವ ರಾಷ್ಟ್ರೀಯ ಗ್ರಂಥಪಾಲಕರ ದಿನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
- ಗ್ರಂಥಾಲಯದ ಉಪಯೋಗ, ಪುಸ್ತಕಗಳ ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಅಗತ್ಯವನ್ನು ವಿವರಿಸಲಾಯಿತು.
- ಡಾ. ರಂಗನಾಥನ್ ಅವರ ಜೀವನ ಮತ್ತು ಭಾರತದ ಗ್ರಂಥಾಲಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ದೃಶ್ಯ ಮಾಧ್ಯಮದ ಮೂಲಕ ಮಾಹಿತಿ ನೀಡಲಾಯಿತು.


