Bengaluru, July 21: A meaningful awareness program on the topic of ‘Healthy Hygiene and Nutritious Food’ was organised for the students of classes 1 and 2 under the ‘Student Development Program’ (SDP) at Rashtrotthana Vidya Kendra – Somanahalli. Smt. Yogita, who was the resource person for the program, convinced the children about the importance of a healthy lifestyle. She simply explained the need to wash hands properly, maintain personal hygiene, eat nutritious food and stay away from junk food. She also demonstrated exercises related to various parts of the body, pranayama, surya namaskar and yoga asanas, which she said increase physical health, concentration, memory power and intellectual development. The students participated enthusiastically in the program and resolved to adopt healthy habits in their daily lives.

ಬೆಂಗಳೂರು, ಜು. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗಾಗಿ ʼವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮʼ (SDP) ಅಡಿಯಲ್ಲಿ ʼಆರೋಗ್ಯಕರ ಶುಚಿತ್ವ ಮತ್ತು ಪೌಷ್ಟಿಕ ಆಹಾರʼ ವಿಷಯದ ಕುರಿತು ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀಮತಿ ಯೋಗಿತಾ ಅವರು ಮಕ್ಕಳಿಗೆ ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಕೈಗಳನ್ನು ಸರಿಯಾದ ವಿಧಾನದಲ್ಲಿ ತೊಳೆಯುವುದು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು, ಪೌಷ್ಟಿಕ ಆಹಾರ ಸೇವಿಸುವುದು ಹಾಗೂ ಜಂಕ್ ಫುಡ್‌ನಿಂದ ದೂರವಿರುವ ಅಗತ್ಯವನ್ನು ಸರಳವಾಗಿ ವಿವರಿಸಿದರು. ಜೊತೆಗೆ ದೇಹದ ವಿವಿಧ ಅಂಗಗಳಿಗೆ ಸಂಬಂಧಿಸಿದ ವ್ಯಾಯಾಮಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ ಮತ್ತು ಯೋಗಾಸನಗಳನ್ನು ಪ್ರಾಯೋಗಿಕವಾಗಿ ಮಾಡಿಸಿ, ಅವುಗಳಿಂದ ದೈಹಿಕ ಆರೋಗ್ಯ, ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಬುದ್ಧಿವಿಕಾಸ ಹೆಚ್ಚುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಆರೋಗ್ಯಕರ ಅಭ್ಯಾಸಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.