Swadeshi Saptaha celebration in RVK – Somanahalli

Home > News & Events >Swadeshi Saptaha celebration in RVK – Somanahalli

Bengaluru, Sept 24-30: Swadeshi Saptaha was celebrated herein Rashtrotthana Vidya Kendra – Somanahalli.The week-long event highlighted India’s rich cultural heritage, self-reliance and the importance of supporting local products.Each day of the week was dedicated to a different theme, showcasing Indian traditional clothing, food, art forms, inventions and inventors.The teachers conducted various activities like product displays, traditional dress, food festivals and traditional Indian sports representing the diverse regions of India. Students were introduced to the importance of Swadeshi movement, introduction to Indian brands.On the concluding day of the week, Principal Smt. Ramya Suhas Udupa spoke about the history of Swadeshi Saptaha and spoke about the use of local materials and promoting sustainable living.

ಬೆಂಗಳೂರು, ಸಪ್ಟೆಂಬರ್ 24-30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಸ್ವದೇಶೀ ಸಪ್ತಾಹವನ್ನು ಆಚರಿಸಲಾಯಿತು. ಒಂದು ವಾರ ನಡೆದ ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸ್ವಾವಲಂಬನೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಬೆಂಬಲಿಸುವ ಪ್ರಾಮುಖ್ಯತೆಯನ್ನು ಬಿಂಬಿಸಿತ್ತು.ವಾರದ ಪ್ರತಿದಿನವೂ ವಿಭಿನ್ನ ಥೀಮ್ ಗೆ ಮೀಸಲಾಗಿದ್ದು, ಭಾರತೀಯ ಸಾಂಪ್ರದಾಯಿಕ ಉಡುಪು, ಆಹಾರ, ಕಲಾ ಪ್ರಕಾರಗಳು, ಆವಿಷ್ಕಾರಗಳು ಮತ್ತು ಆವಿಷ್ಕರಿಸಿದವರ ಪ್ರದರ್ಶನವನ್ನು ನಡೆಸಲಾಯಿತು.ಶಿಕ್ಷಕರು ಭಾರತದ ವೈವಿಧ್ಯಮಯ ಪ್ರದೇಶಗಳನ್ನು ಪ್ರತಿನಿಧಿಸುವ ಉತ್ಪನ್ನ ಪ್ರದರ್ಶನಗಳು, ಸಾಂಪ್ರದಾಯಿಕ ಉಡುಗೆ ಚಿತ್ರಣ, ಆಹಾರ ಉತ್ಸವಗಳು ಮತ್ತು ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಂತಹ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಸ್ವದೇಶೀ ಆಂದೋಲನದ ಮಹತ್ತ್ವವನ್ನು, ಭಾರತೀಯ ಬ್ರ್ಯಾಂಡ್ ಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಸಪ್ತಾಹದ ಮುಕ್ತಾಯದ ದಿನ ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯಾ ಸುಹಾಸ್ ಉಡುಪ ಅವರು ಸ್ವದೇಶೀ ಸಪ್ತಾಹದ ಇತಿಹಾಸದ ಕುರಿತು ಮಾತನಾಡುತ್ತ ಸ್ಥಳೀಯ ವಸ್ತುಗಳ ಬಳಕೆ ಮತ್ತು ಸುಸ್ಥಿರ ಬದುಕನ್ನು ಉತ್ತೇಜಿಸುವ ಬಗ್ಗೆ ಹೇಳಿದರು.

Scroll to Top