Bengaluru, Aug 23: The celebration of Sri Krishna Janmashtami took place herein Rashtrotthana Vidya Kendra – Somanahalli. The participants adorned the idol of Sri Krishna with exquisite decorations and prepared prasada from their homes, contributing to the festive atmosphere with their offerings. The event commenced with the lighting of a lamp and the presentation of flowers to Sri Krishna.The children expressed their deep devotion by singing the song of Krishna. They danced gracefully, reminiscent of a peacock. All the children of Gokula adorned themselves as Sri Krishna and Radha, taking a small step forward in front of Krishna, thereby enhancing the joy of the festival.Breaking of Matka game was arranged for the children with the help of physical education teacher of the school.Finally, the children and teachers performed a group dance worshiping Krishna.On the same occasion, on the occasion of Rajaguru Jayanti, children were made aware of patriotism by showing the life of Rajaguru through a video in the class.
ಬೆಂಗಳೂರು, ಆಗಸ್ಟ್ 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶ್ರೀ ಕೃಷ್ಣನನ್ನು ಸುಂದರವಾಗಿ ಸಿಂಗರಿಸಿ. ಕೃಷ್ಣನಿಗೆ ತಮ್ಮ ತಮ್ಮ ಮನೆಗಳಿಂದ ಪ್ರಸಾದವನ್ನು ಮಾಡಿತಂದು ನೈವೇದ್ಯವನ್ನು ಇಟ್ಟು ಹಬ್ಬದ ಕಳೆಯನ್ನು ತುಂಬಿದರು. ಶ್ರೀ ಕೃಷ್ಣನಿಗೆ ದೀಪ ಪ್ರಜ್ವಲನೆ ಹಾಗೂ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮಕ್ಕಳು ಮನಮುಟ್ಟುವಂತೆ ಭಕ್ತಿಯಿಂದ ಕೃಷ್ಣನ ಹಾಡನ್ನು ಹಾಡಿದರು. ನವಿಲಿನ ನಾಟ್ಯದಂತೆ ನರ್ತಿಸಿದರು. ಗೊಕುಲದ ಮಕ್ಕಳೆಲ್ಲರೂ ಶ್ರೀ ಕೃಷ್ಣ ಮತ್ತು ರಾಧೆಯ ವೇಷವನ್ನು ಧರಿಸಿ ಕೃಷ್ಣನ ಮುಂದೆ ಪುಟ್ಟ ಪುಟ್ಟ ಹೆಜ್ಜೆಯನ್ನು ಹಾಕಿ ಹಬ್ಬಕ್ಕೆ ಮತ್ತಷ್ಟು ಮೆರಗನ್ನು ನೀಡಿದರು.ಶಾಲೆಯ ದೈಹಿಕ ಶಿಕ್ಷಕರ ನೆರವಿನಲ್ಲಿ ಮಡಕೆಯನ್ನು ಒಡೆಯುವ ಆಟವನ್ನು ಮಕ್ಕಳಿಗೆ ಏರ್ಪಡಿಸಲಾಗಿತ್ತು.ಕೊನೆಯದಾಗಿ ಮಕ್ಕಳು ಮತ್ತು ಶಿಕ್ಷಕರು ಗುಂಪಿನಲ್ಲಿ ಕೃಷ್ಣನ ಆರಾಧನೆಯನ್ನು ಮಾಡುತ್ತ ನೃತ್ಯವನ್ನು ಮಾಡಿದರು.ಇದೇ ಸಂದರ್ಭದಲ್ಲಿ ರಾಜಗುರು ಜಯಂತಿಯ ಪ್ರಯುಕ್ತ ರಾಜಗುರುವಿನ ಜೀವನ ಪರಿಚಯ ತರಗತಿಯಲ್ಲಿ ವಿಡಿಯೋ ಮೂಲಕ ತೋರಿಸಿ ಮಕ್ಕಳಿಗೆ ದೇಶಪ್ರೇಮದ ಅರಿವು ಮೂಡಿಸಲಾಯಿತು.