‘Rashtrotsava’ Celebration in RVK – Somanahalli

Home > News & Events >‘Rashtrotsava’ Celebration in RVK – Somanahalli

Bengaluru, Feb. 8: Rashtrotthana Vidya Kendra – Somanahalli celebrated the ‘Rashtrotsava’ under the theme ‘Jayatu Bharatam – From Innocence to Patriotism’. The Chief Guest was Smt. Tejaswini Ananth Kumar, President and Co-Founder of Adamya Chetana Foundation. The guests were welcomed with a Poorna Kumbha. The Chief Guest, Smt. Tejaswini Ananth Kumar spoke about the work of Adamya Chetana Sanstha towards reducing the use of plastic. She spoke in detail about reducing the use of plastic with biodegradable materials and recycling to reduce environmental damage. Sri Maheshwaraiah S. B. spoke about the project of Rashtrotthana Parishad and its work. He spoke about the RP@60 program and the RVK schools expanding across Karnataka. Students from Gokulam to 6th grade performed dance, music and drama. The programs were designed around themes that depicted the rich culture and family of India, the importance of preserving our nature, such as preserving nature, good morals, service spirit and patriotism.

ಬೆಂಗಳೂರು, ಫೆ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ‘ಜಯತು ಭಾರತಂ – ಮುಗ್ಧತೆಯಿಂದ ದೇಶಾಭಿಮಾನದ ಕಡೆಗೆ’ ಥೀಮ್ ಅಡಿಯಲ್ಲಿ ರಾಷ್ಟ್ರೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಅದಮ್ಯ ಚೇತನ ಫೌಂಡೇಶನ್‌ನ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಆಗಮಿಸಿದ್ದರು.  ಅತಿಥಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಮುಖ್ಯ ಅತಿಥಿಗಳಾದ ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದಮ್ಯ ಚೇತನ ಸಂಸ್ಥೆಯ ಕಾರ್ಯದ ಬಗ್ಗೆ ಮಾತನಾಡಿದರು. ಜೈವಿಕ ವಿಘಟನೀಯ ವಸ್ತುಗಳಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಹಾನಿಯನ್ನು ಕಡಿಮೆ ಮಾಡಲು ಮರುಬಳಕೆ ಮಾಡುವುದರ ಬಗ್ಗೆ ವಿವರವಾಗಿ ತಿಳಿಸಿದರು.ಶ್ರೀ ಮಹೇಶ್ವರಯ್ಯ ಎಸ್. ಬಿ. ಅವರು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಕಲ್ಪವನ್ನು ಕಾರ್ಯದ ಬಗ್ಗೆ ತಿಳಿಸಿದರು. RP@60 ಕಾರ್ಯಕ್ರಮದ ಬಗ್ಗೆ ಹಾಗೂ ಕರ್ನಾಟಕದಾದ್ಯಂತ ವಿಸ್ತರಿಸುತ್ತಿರುವ ಆರ್‌ವಿಕೆ ಶಾಲೆಗಳನ್ನು ಬಗ್ಗೆ ತಿಳಿಸಿದರು.  ಗೋಕುಲಂನಿಂದ 6 ನೇ ತರಗತಿಯವರೆಗಿನ ವಿದ್ಯಾರ್ಥಿಗಳು ನೃತ್ಯ, ಸಂಗೀತ ಮತ್ತು ನಾಟಕವನ್ನು ಪ್ರದರ್ಶಿಸಿದರು. ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಿವಾರ, ಪ್ರಕೃತಿಯನ್ನು ಉಳಿಸಿ, ಸಂಸ್ಕಾರ ಸದಾಚಾರ, ಸೇವಾ ಭಾವ ಮತ್ತು ದೇಶರಕ್ಷಕದಂತಹ ನಮ್ಮ ಪ್ರಕೃತಿಯನ್ನು ಉಳಿಸುವ ಪ್ರಾಮುಖ್ಯತೆಯನ್ನು ಚಿತ್ರಿಸುವ ವಿಷಯದ ಸುತ್ತ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು.

Scroll to Top