Rakshabandhan and Sanskrit Day in RVK – Somanahalli

Bengaluru, Aug 19: Rakshabandhan and Sanskrit Day was celebrated herein Rashtrotthana Vidya Kendra – Somanahalli under the motto ‘Universal Brotherhood’.The program was started by offering flowers to Raksha.The message was conveyed through a short play. The entire program was narrated in Sanskrit as part of Sanskrit Day. The significance of the day was conveyed through the speech. All the students, teachers, drivers and housekeeping staff of Rashtrotthana Vidya Kendra joined together and tied the Rakhee. The message of ‘We will protect, we will get protection from society’ was spread by tying Raksha to the people outside the school. The students were divided into 3 groups and sent to private and government schools, police stations and hospitals.The students made the message of Rakshabandhan resonate in the society by singing the song ‘Rakshe Kattuvevu Navu Rakshe Kattuvevu Navu’ at different places. Students conveyed the message of world brotherhood and peace to the society by building mutual protection.

ಬೆಂಗಳೂರು, ಆಗಸ್ಟ್ 19: ‘ವಿಶ್ವಭ್ರಾತೃತ್ವ’ ಧ್ಯೇಯವಾಕ್ಯದ ಅಡಿಯಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ರಕ್ಷಾಬಂಧನ ಮತ್ತು ಸಂಸ್ಕೃತ ದಿನವನ್ನು ಆಚರಿಸಲಾಯಿತು. ರಕ್ಷೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಿರುನಾಟಕದ ಮೂಲಕ ಸಂದೇಶವನ್ನು ತಿಳಿಸಲಾಯಿತು. ಸಂಸ್ಕೃತ ದಿನದ ಅಂಗವಾಗಿ ಸಂಪೂರ್ಣ ಕಾರ್ಯಕ್ರಮವನ್ನು ಸಂಸ್ಕೃತದಲ್ಲೇ ನಿರೂಪಿಸಲಾಯಿತು. ಭಾಷಣದ ಮೂಲಕ ದಿನದ ಮಹತ್ತ್ವವನ್ನು ತಿಳಿಸಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಡ್ರೈವರ್ ಗಳು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸೇರಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಪರಿವಾರದವರೆಲ್ಲ ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡರು. ‘ರಕ್ಷಿಸುತ್ತೇವೆ, ಸಮಾಜದಿಂದ ರಕ್ಷಣೆ ಪಡೆಯುತ್ತೇವೆ’ ಎನ್ನುವ ಸಂದೇಶವನ್ನು ಶಾಲೆಯ ಹೊರಗಿನ ವ್ಯಾಪ್ತಿಯ ಜನರಿಗೆ ರಕ್ಷೆಯನ್ನು ಕಟ್ಟುವ ಮೂಲಕ ಹರಡಲಾಯಿತು. ವಿದ್ಯಾರ್ಥಿಗಳನ್ನು 3 ಗುಂಪುಗಳಾಗಿ ವಿಭಜಿಸಿ, ಖಾಸಗಿ ಮತ್ತು ಸರ್ಕಾರೀ ಶಾಲೆಗಳು, ಪೊಲೀಸ್ ಸ್ಟೇಶನ್ ಮತ್ತು ಆಸ್ಪತ್ರೆಗಳಿಗೆ ಕಳುಹಿಸಲಾಯಿತು. ವಿದ್ಯಾರ್ಥಿಗಳು ‘ರಕ್ಷೆ ಕಟ್ಟುವೆವು ನಾವು ರಕ್ಷೆ ಕಟ್ಟುವೆವು ನಾವು’ ಎನ್ನುವ ಹಾಡನ್ನು ವಿವಿಧ ಕಡೆ ಹಾಡುವ ಮೂಲಕ ರಕ್ಷಾಬಂಧನದ ಸಂದೇಶವು ಸಮಾಜದಲ್ಲಿ ಪ್ರತಿಧ್ವನಿಸುವಂತೆ ಮಾಡಿದರು. ರಕ್ಷೆಯನ್ನು ಪರಸ್ಪರ ಕಟ್ಟುವ ಮೂಲಕ ವಿಶ್ವ ಭ್ರಾತೃತ್ವ ಮತ್ತು ಶಾಂತಿಯ ಸಂದೇಶವನ್ನು ಸಮಾಜಕ್ಕೆ ತಲಪಿಸಿದರು.

Scroll to Top