Kreedotsava Celebration in RVK – Somanahalli

Bengaluru, Nov. 30: Kreedotsava (Annual Sports Day) was celebrated herein Rashtrotthana Vidya Kendra – Somanahalli. Ku. Pratibha, an ex-student of Banashankari Vidya Kendra graced the program. After the flag hoisting, a march past was held by the students. The school Sports Head administered the oath to the students. The Chief Guest, Ku. Pratibha, emphasized the importance of sports in the development of student discipline, teamwork and participation. The program was inaugurated by lighting the sports lamp. Individual and team sports were organized for different age groups. Each event was organized with specific times and time was adjusted between the events. The students participated in the competition with enthusiasm. A game competition was also held for the parents. The winners of each competition were awarded medals, certificates and trophies. The special feature of the day was that the overall winning channel of the day was awarded the Champions Award. Special awards were given to the best athlete (male and female) and the best sports award was given to the students. At the closing ceremony, the Principal and the Chief Guest congratulated the winners and participants for their enthusiasm and efforts. The program concluded with the hoisting of the flag and the national anthem.

ಬೆಂಗಳೂರು, ನ. 30: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಕ್ರೀಡೋತ್ಸವವನ್ನು (ವಾರ್ಷಿಕ ಕ್ರೀಡಾ ದಿನ) ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬನಶಂಕರಿ ವಿದ್ಯಾಕೇಂದ್ರದ ಮಾಜಿ ವಿದ್ಯಾರ್ಥಿನಿ ಕು. ಪ್ರತಿಭಾ ಅವರು ಆಗಮಿಸಿದ್ದರು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳಿಂದ ಮಾರ್ಚ್‌ಪಾಸ್ಟ್ ನಡೆಯಿತು. ಶಾಲಾ ಕ್ರೀಡಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿ ಕು. ಪ್ರತಿಭಾ ಅವರು ವಿದ್ಯಾರ್ಥಿಯ ಶಿಸ್ತು, ಸಾಂಘಿಕ ಕೆಲಸ ಮತ್ತು ಭಾಗವಹಿಸುವಿಕೆಯ ಬೆಳವಣಿಗೆಯಲ್ಲಿ ಕ್ರೀಡೆಯ ಮಹತ್ತ್ವವನ್ನು ಒತ್ತಿ ಹೇಳಿದರು. ಕ್ರೀಡಾ ಜ್ಯೋತಿಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಧ ವಯೋಮಾನದವರಿಗಾಗಿ ವೈಯಕ್ತಿಕ ಮತ್ತು ತಂಡದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಂದು ಈವೆಂಟ್ ಅನ್ನು ನಿರ್ದಿಷ್ಟ ಸಮಯಗಳೊಂದಿಗೆ ಆಯೋಜಿಸಿ ಈವೆಂಟ್ ಗಳ ನಡುವೆ ಸಮಯದ ಹೊಂದಾಣಿಕೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು. ಪೋಷಕರಿಗಾಗಿಯೂ ಆಟದ ಸ್ಪರ್ಧೆ ನಡೆಸಲಾಯಿತು. ಪ್ರತಿ ಸ್ಪರ್ಧೆಯ ವಿಜೇತರಿಗೆ ಪದಕ, ಪ್ರಮಾಣಪತ್ರ ಮತ್ತು ಟ್ರೋಫಿಗಳನ್ನು ನೀಡಲಾಯಿತು. ದಿನದ ವಿಶೇಷವೆಂದರೆ ದಿನದ ಒಟ್ಟಾರೆ ವಿಜೇತ ವಾಹಿನಿಗೆ ಚಾಂಪಿಯನ್ಸ್ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ಅಥ್ಲೀಟ್(ಪುರುಷ ಮತ್ತು ಮಹಿಳೆ)ಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು ಮತ್ತು ಅತ್ಯುತ್ತಮ ಕ್ರೀಡಾ ಪ್ರಶಸ್ತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ಪ್ರದಾನಾಚಾರ್ಯರು ಮತ್ತು ಮುಖ್ಯ ಅತಿಥಿಗಳು ವಿಜೇತರು ಮತ್ತು ಭಾಗವಹಿಸಿದವರ ಉತ್ಸಾಹ ಮತ್ತು ಪ್ರಯತ್ನಕ್ಕಾಗಿ ಅಭಿನಂದಿಸಿದರು. ಧ್ವಜಾರೋಹಣ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Scroll to Top