Bengaluru, Mar. 14: Holi festival was celebrated herein Rashtrotthana Vidya Kendra – Somanahalli. The program was inaugurated by Sri Yashwanth, who is in charge of the school administration, by offering puja to Manmatha. Then, the Manmatha was burnt to destroy evil spirits and encourage good deeds. Then, a student of class six gave a detailed background on the celebration of Holi to everyone. Similarly, the students of class three danced on the Holi festival. The principal, Smt. Ramya, offered puja to the pillar. The students of class five and six beat the pot. Finally, everyone applied colours to each other and sang songs and danced.
ಬೆಂಗಳೂರು, ಮಾ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲೆಯ ಆಡಳಿತ ಉಸ್ತುವಾರಿಯನ್ನು ನಡೆಸುವ ಶ್ರೀ ಯಶವಂತ್ ಅವರು ಮನ್ಮಥನಿಗೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಉದ್ಘಾಟಿಸಿದರು. ನಂತರ ದುಷ್ಟ ಶಕ್ತಿಗಳನ್ನು ನಾಶ ಮಾಡಿ ಸತ್ಕರ್ಮಗಳನ್ನು ಉತ್ತೇಜಿಸುವ ಸಲುವಾಗಿ ಮನ್ಮಥನ ದಹನವನ್ನು ಮಾಡಲಾಯಿತು. ನಂತರ ಆರನೇ ತರಗತಿಯ ವಿದ್ಯಾರ್ಥಿ ವರ್ಷ ಹೋಳಿ ಹಬ್ಬದ ಆಚರಣೆಯನ್ನು ಕುರಿತು ಹಿನ್ನೆಲೆಯನ್ನು ಎಲ್ಲರಿಗೂ ಸವಿಸ್ತಾರವಾಗಿ ತಿಳಿಸಿದಳು. ಹಾಗೆಯೇ ಮೂರನೇ ತರಗತಿಯ ವಿದ್ಯಾರ್ಥಿಗಳು ಹೋಳಿ ಹಬ್ಬವನ್ನು ಕುರಿತು ನರ್ತಿಸಿದರು. ಪ್ರಧಾನಾಚಾರ್ಯರಾದ ಶ್ರೀಮತಿ ರಮ್ಯಾ ಅವರು ಕಂಬಕ್ಕೆ ಪೂಜೆಯನ್ನು ಸಲ್ಲಿಸಿದರು. ಐದನೇ ಮತ್ತು ಆರನೇ ತರಗತಿಯ ವಿದ್ಯಾರ್ಥಿಗಳು ಮಡಕೆಯನ್ನು ಹೊಡೆದರು. ಕೊನೆಯದಾಗಿ ಎಲ್ಲರೂ ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಹಾಡುಗಳನ್ನು ಹೇಳಿಕೊಂಡು ಕುಣಿದಾಡಿದರು.