Bengaluru, June 9: Hindu Samrajyotsava was celebrated herein Rashtrotthana Vidya Kendra – Somanahalli. The students talked about Shivaji defeating the Mughals and establishing the Hindu Empire. When Shivaji was a child, his mother instilled a sense of patriotism in him. Due to this, he decided to establish the Maratha Empire against the Mughals. Despite having no state or army, he formed a group of his own people and started fighting against the Mughals. Following tactics like guerrilla warfare, he finally succeeded in establishing the Hindu Empire, capturing one fort after another from the hands of the Mughals. He informed that today we are celebrating the day of Shivaji’s coronation in Rayagada as Hindu Empire Day. The students performed a play on the life of Shivaji that talks about his courage and adventure.
ಬೆಂಗಳೂರು, ಜೂ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಹಿಂದೂ ಸಾಮ್ರಾಜ್ಯ ದಿವಸವನ್ನು ಆಚರಿಸಲಾಯಿತು. ಶಿವಾಜಿ ಮೊಘಲರನ್ನು ಸೋಲಿಸಿ ಹಿಂದು ಸಾಮ್ರಾಜ್ಯವನ್ನು ಸ್ಥಾಪಿಸಿದ ಬಗ್ಗೆ ವಿದ್ಯಾರ್ಥಿಗಳು ತಿಳಿಸಿದರು. ಶಿವಾಜಿಯು ಬಾಲ್ಯದಲ್ಲಿದ್ದಾಗ ತಾಯಿಯು ಆತನಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಿದ್ದರು. ಇದರಿಂದಾಗಿ ಆತ ಮೊಘಲರ ವಿರುದ್ಧ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂದು ಪಣತೊಟ್ಟನು. ರಾಜ್ಯ, ಸೈನ್ಯ ಏನೂ ಇಲ್ಲದಿದ್ದರೂ ತನ್ನದೇ ಆದ ಒಂದಷ್ಟು ಜನರ ಗುಂಪನ್ನು ರಚಿಸಿ ಮೊಘಲರ ವಿರುದ್ಧ ಹೋರಾಟವನ್ನು ಆರಂಭಿಸಿದನು. ಗೆರಿಲ್ಲಾ ಯುದ್ಧದಂತಹ ತಂತ್ರಗಳನ್ನು ಅನುಸರಿಸಿ ಮೊಘಲರ ಕೈಯಿಂದ ಒಂದೊಂದೇ ಕೋಟೆಯನ್ನು ವಶಪಡಿಸಿಕೊಳ್ಳುತ್ತಾ, ಕೊನೆಗೆ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದನು. ಶಿವಾಜಿಗೆ ರಾಯಗಡದಲ್ಲಿ ಪಟ್ಟಾಭಿಷೇಕವಾದ ದಿನವನ್ನು ಇಂದು ನಾವು ಹಿಂದೂ ಸಾಮ್ರಾಜ್ಯ ದಿನವಾಗಿ ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಶಿವಾಜಿಯ ಜೀವನಕ್ಕೆ ಸಂಬಂಧಿಸಿದಂತೆ, ಆತನ ಧೈರ್ಯ, ಸಾಹಸವನ್ನು ತಿಳಿಸುವ ಒಂದು ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.