Bengaluru, Mar. 7: Gokulam Srujanotsava was organized herein Rashtrotthana Vidya Kendra – Somanahalli. An art and craft exhibited in the school premises. Parents were also present and encouraged the creativity of the children. The children displayed what they had learnt during this academic session and spoke with confidence. Various activities including English language skills, math puzzles, EVS presentations, shlokas, stories and sensory activities were showcased. The parents were welcomed with a respectful “Namaste”. A child dressed as Hanuman brought the story of that great personality to life.
ಬೆಂಗಳೂರು, ಮಾ. 7: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಗೋಕುಲಂ ಸೃಜೋನೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಲೆ ಮತ್ತು ಕರಕುಶಲ ಕಲೆಯ ಪ್ರದರ್ಶನವು ಶಾಲಾ ಆವರಣದಲ್ಲಿ ನಡೆಯಿತು. ಪೋಷಕರೂ ಹಾಜರಿದ್ದು ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸಿದರು. ಈ ಶೈಕ್ಷಣಿಕ ಅವಧಿಯಲ್ಲಿ ತಾವು ಕಲಿತದ್ದನ್ನು ಮಕ್ಕಳು ಪ್ರದರ್ಶಿಸಿ, ಆತ್ಮವಿಶ್ವಾಸದಿಂದ ಮಾತನಾಡಿದರು. ಇಂಗ್ಲಿಷ್ ಭಾಷಾ ಕೌಶಲ್ಯಗಳು, ಗಣಿತ ಒಗಟುಗಳು, EVS ಪ್ರಸ್ತುತಿಗಳು, ಶ್ಲೋಕಗಳು, ಕಥೆಗಳು ಮತ್ತು ಸಂವೇದನಾ ಚಟುವಟಿಕೆಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಲಾಯಿತು. ಪೋಷಕರನ್ನು ಗೌರವಯುತ “ನಮಸ್ತೆ” ಯೊಂದಿಗೆ ಸ್ವಾಗತಿಸಲಾಯಿತು. ಹನುಮಂತನ ವೇಷ ಧರಿಸಿದ ಮಗುವೊಂದು ಆ ಮಹಾನ್ ವ್ಯಕ್ತಿತ್ವದ ಕಥೆಗೆ ಜೀವ ತುಂಬಿತ್ತು.