Bengaluru, Mar. 15: ‘Chandana’ program was organized herein Rashtrotthana Vidya Kendra – Somanahalli.Traditional games like Danda Datuma, Havina Bala, Churi Chikkanna etc. were the highlights of the program.School students sang a group bhajan. They performed a dance depicting the diverse culture of India. They performed a Skit telling the life story of freedom fighter Rani Lakshmibai. Sri Guruprasad, Kutumba Prabhodhana Coordinator, Bengaluru South Division, conducted the intellectual program. Traditional food was enjoyed by students, parents and staff.
ಬೆಂಗಳೂರು, ಮಾ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಚಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ದೇಸಿ ಸಾಂಪ್ರದಾಯಿಕ ಆಟಗಳಾದ ದಂಡ ದಾಟುಮ, ಹಾವಿನ ಬಾಲ, ಚೂರಿ ಚಿಕ್ಕಣ್ಣ ಮೊದಲಾದವು ಕಾರ್ಯಕ್ರಮದ ಗಮನ ಸೆಳೆಯುವ ಅಂಶವಾಗಿತ್ತು.
ಶಾಲಾವಿದ್ಯಾರ್ಥಿಗಳು ಸಮೂಹ ಭಜನೆ ಹಾಡಿದರು. ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯವನ್ನು ಪ್ರದರ್ಶಿಸಿದರು. ಸ್ವಾತಂತ್ರ್ಯ ಸೇನಾನಿ ರಾಣಿ ಲಕ್ಷ್ಮೀಬಾಯಿಯ ಜೀವನ ಕಥನವನ್ನು ಹೇಳುವ ಕಿರುನಾಟಕವನ್ನು ಪ್ರದರ್ಶಿಸಿದರು. ಬೆಂಗಳೂರು ದಕ್ಷಿಣ ವಿಭಾಗದ ಕುಟುಂಬ ಪ್ರಬೋಧನ ಸಂಯೋಜಕರಾದ ಶ್ರೀ ಗುರುಪ್ರಸಾದ್ ಅವರು ಬೌದ್ಧಿಕ ಅನ್ನು ನಡೆಸಿಕೊಟ್ಟರು. ಸಾಂಪ್ರದಾಯಿಕ ಭೋಜನವನ್ನು ವಿದ್ಯಾರ್ಥಿಗಳು, ಪಾಲಕರು, ಹಾಗೂ ಸಿಬ್ಬಂದಿ ವರ್ಗದವರು ಸವಿದರು.