Celebration of Sri Tulasidas Jayanti & National librarians Day in RVK – Somanahalli

Tulsidas is revered as a prominent saint, and his remarkable composition, the Hanuman Chalisa, continues to be recited in contemporary times. Dr. S R Ranganathan was a distinguished researcher, mathematician, and national professor of library science in India. This information was presented by the students of Rashtrotthana Vidya Kendra – Somanahalli in celebration of Tulasidasa Jayanti and National Librarians Day. Bengaluru, August 12: The anniversary of the esteemed saint Sri Tulasidas and the Father of library science, Dr. S R. Ranganathan, was commemorated with the celebration of National Librarians Day herein Rashtrotthana Vidya Kendra – Somanahalli. The program started by placing flowers on Sri Tulsidas and Dr. S R Ranganathan’s portrait.Children dressed up as Sri Tulasidas and gave a short speech on his biography.

ತುಳಸಿದಾಸರು ಮಹಾನ್ ಸಂತರು. ಅವರು ಬರೆದ ಶ್ರೇಷ್ಠ ಹನುಮಾನ್ ಚಾಲೀಸಾ ಸ್ತೋತ್ರಗಳು ಇಂದಿಗೂ ಪಠಿಸಲ್ಪಡುತ್ತಿದೆ. ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರು ಒಬ್ಬ ಸಂಶೋಧಕ, ಗಣಿತಜ್ಞ ಹಾಗೂ ಗ್ರಂಥಪಾಲಕ ಅಧ್ಯಾಪಕರಾಗಿದ್ದರು ಎನ್ನುವ ಮಾಹಿತಿಯನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯ ಮಕ್ಕಳು ತುಲಸಿದಾಸ ಜಯಂತಿ ಹಾಗೂ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಸಂದರ್ಭದಲ್ಲಿ ಹಂಚಿಕೊಂಡರು. ಬೆಂಗಳೂರು, ಆಗಸ್ಟ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಸೋಮನಹಳ್ಳಿಯಲ್ಲಿ ಮಹಾನ್ ಸಂತ ಶ್ರೀ ತುಲಸಿದಾಸರ ಜಯಂತಿ ಹಾಗೂ ಗ್ರಂಥಾಲಯ ವಿಜ್ಞಾನದ ರಾಷ್ಟ್ರಪಿತ ಎಂದೇ ಹೇಳುವ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಪ್ರಯುಕ್ತವಾಗಿ ಆಚರಿಸಲಾಗುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.ಶ್ರೀ ತುಲಸಿದಾಸರು ಹಾಗೂ ಡಾ. ಎಸ್. ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮಕ್ಕಳು ಶ್ರೀ ತುಲಸಿದಾಸರ ಛದ್ಮವೇಷವನ್ನು ಧರಿಸಿ ಅವರ ಜೀವನ ಚರಿತ್ರೆಯ ಕುರಿತು ಕಿರುಭಾಷಣವನ್ನು ಮಾಡಿದರು.

Scroll to Top