Aksharabhyasa And Vidyarabham in RVK – Somnahalli

Bengaluru, May. 25: The Aksharabhya and Vidyarambha program for the
year 2025-26 was organized herein Rashtrotthana Vidya Kendra –
Somanahalli.The program was started with Ganapati Puja and Saraswati Homa. His Holiness Sri Sri Veereshananda Saraswati Swamiji graced the program and did Poornahuti.The Pradhanacharya spoke about the aims and objectives of the Rashtrotthana Parishath.Swamiji offered flowers to the students. The students of class VII sang the patriotic song. The teacher gave a sermon to the students and parents about the responsibility of parents in preserving our Indian heritage and culture. Swamiji greeted and blessed the newly arrived parents and students at Somanahalli School.Books and prasad were distributed to the parents and children.

ಬೆಂಗಳೂರು, ಮೇ. 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ 2025-26ನೇ ಸಾಲಿನ ಅಕ್ಷರಾಭ್ಯಾಸ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಗಣಪತಿ ಪೂಜೆ ಮತ್ತು ಸರಸ್ವತಿ ಹೋಮದೊಂದಿಗೆ ಆರಂಭಿಸಲಾಯಿತು. ಈ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. ಪೂಜ್ಯಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸಿ ಪೂರ್ಣಾಹುತಿಯನ್ನು ಪೂರ್ಣಗೊಳಿಸಿದರು. ಪ್ರಧಾನಾಚಾರ್ಯರು ರಾಷ್ಟ್ರೋತ್ಥಾನದ ಪರಿಷತ್ತಿನ ಧ್ಯೇಯ-ಉದ್ದೇಶಗಳನ್ನು ಕುರಿತು ಸುದೀರ್ಘ ತಿಳಿಸಿದರು. ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ ಮಾಡಿದರು. ಏಳನೇ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು. ಗುರುಗಳು ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಕುರಿತು ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ ಉಳಿಸುವಲ್ಲಿ ಪೋಷಕರ ಜವಾಬ್ದಾರಿಯ ಕುರಿತು ಉಪದೇಶ ನೀಡಿದರು. ಸೋಮನಹಳ್ಳಿ ಶಾಲೆಗೆ ಹೊಸದಾಗಿ ಬಂದಿರುವ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿ, ಆಶೀರ್ವದಿಸಿದರು.ಪಾಲಕರಿಗೆ ಮತ್ತು ಮಕ್ಕಳಿಗೆ ಪುಸ್ತಕ ಮತ್ತು ಪ್ರಸಾದವನ್ನು ವಿತರಿಸಲಾಯಿತು.

Scroll to Top