Bengaluru, Dec. 6: Under the ‘Educational Tour’, a Agri Field visit was conducted herein Rashtrotthana Vidya Kendra – Somanahalli with the main objective of making the students of class I and II aware of the hard work of the farmer and the method of growing food grains. First, they visited the Anjaneya temple near the field and visited the small Cattle Farming place there, cut the grass that grew in the field and fed it to the cows. They helped the farmers to tie the paddy husk by carrying the loads of paddy. They collected the lemons that grew in the farm and made lemonade to quench their thirst. After getting acquainted with the various plants that grew in the farm, they helped the farmers by plucking the yam, chillies, coconuts and sapota fruits. After playing Hide and Seek, Marakothi, Mudiso and many other games in the farm, everyone thanked the farmers and returned to school shouting the slogan “Annadata Sukhi Bhavo”.
ಬೆಂಗಳೂರು, ಡಿ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ‘ಶೈಕ್ಷಣಿಕ ವಿಹಾರ’ದಡಿಯಲ್ಲಿ ಒಂದನೇ ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ರೈತನ ಶ್ರಮವನ್ನು ತಿಳಿಸುವ ಹಾಗೂ ಆಹಾರ ಧಾನ್ಯಗಳನ್ನು ಬೆಳೆಯುವ ವಿಧಾನ ತಿಳಿಯುವ ಮುಖ್ಯ ಉದ್ದೇಶದಿಂದ ಕೃಷಿಕ್ಷೇತ್ರ ವೀಕ್ಷಣೆಯನ್ನು ಕೈಗೊಳ್ಳಲಾಗಿತ್ತು. ಮೊದಲಿಗೆ ಕೃಷಿಕ್ಷೇತ್ರದ ಬಳಿ ಇರುವ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ಅಲ್ಲಿಯೇ ಇದ್ದ ಪುಟ್ಟ ಗೋವು ಸಾಕಾಣಿಕೆ ಸ್ಥಳವನ್ನು ವೀಕ್ಷಿಸಿ, ಅಲ್ಲಿಯೇ ಹೊಲದಲ್ಲಿ ಬೆಳೆದಿದ್ದ ಸೀಮೆಹುಲ್ಲನ್ನು ಕತ್ತರಿಸಿ, ಹಸುಗಳಿಗೆ ಆಹಾರವಾಗಿ ನೀಡಿದರು. ಭತ್ತದ ತೆನೆಗಳ ಹೊರೆಗಳನ್ನು ಹೊತ್ತು ಭತ್ತದ ಮೇದೆಯನ್ನು ರೈತರು ಕಟ್ಟುವುದಕ್ಕೆ ಸಹಾಯ ಮಾಡಿದರು. ತೋಟದಲ್ಲಿ ಬೆಳೆದಿದ್ದ ನಿಂಬೆಹಣ್ಣನ್ನು ಸಂಗ್ರಹಿಸಿ ನಿಂಬೆಪಾನಕವನ್ನು ತಯಾರಿಸಿ ಬಾಯಾರಿಕೆಯನ್ನು ನೀಗಿಸಿಕೊಂಡರು. ತೋಟದಲ್ಲಿ ಬೆಳೆದಿದ್ದಂತಹ ಹಲವಾರು ಗಿಡಗಳ ಪರಿಚಯವನ್ನು ಮಾಡಿಕೊಂಡು ತೊಗರಿಬೆಳೆ, ಮೆಣಸಿನಕಾಯಿ, ತೆಂಗಿನಕಾಯಿ ಹಾಗೂ ಸಪೋಟೋ ಹಣ್ಣನ್ನು ಕಿತ್ತು ರೈತರಿಗೆ ಸಹಾಯವನ್ನು ಮಾಡಿದರು. ತೋಟದಲ್ಲಿ ಕಣ್ಣಮುಚ್ಚಾಲೆ, ಮರಕೋತಿ ಆಟ, ಮುಡಿಸೋ ಆಟ ಇನ್ನು ಹಲವಾರು ಆಟಗಳನ್ನು ಆಡಿ, ಎಲ್ಲರೂ ರೈತರಿಗೆ ಧನ್ಯವಾದವನ್ನು ಸಲ್ಲಿಸಿ, ‘ಅನ್ನದಾತ ಸುಖೀ ಭವೋ’ ಎನ್ನುವ ಘೋಷವಾಕ್ಯವನ್ನು ಕೂಗುತ್ತಾ ಶಾಲೆಗೆ ಹಿಂತಿರುಗಿದರು.