Bengaluru, Dec. 28: A World Human Day program was held herein Rashtrotthana Vidya Kendra – Somanahalli on the occasion of the birthday of National Poet, Dramatist, Jnanpith awardee and universal message of humanity Kuvempu. Student Dyuthi composed a poem about Kuvempu and presented it. Student Mithun disguised himself as poet Kuvempu and conveyed universal message and convinced about the biography of poet Kuvempu. Later, on the occasion of World Human Day, sixth grade Jatin drew a portrait of National Poet Kuvempu and created more awareness about poet Kuvempu among the children. Finally, a visual display was shown to provide more information about the National Poet.
ಬೆಂಗಳೂರು, ಡಿ. 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿ ಕನ್ನಡ ನಾಡಿನ ಹೆಮ್ಮೆಯ ಕವಿ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಾಗೂ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಪ್ರಯುಕ್ತವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ದ್ಯುತಿ ಕವಿ ಕುವೆಂಪು ಅವರ ಬಗ್ಗೆ ಕವನವನ್ನು ರಚಿಸಿ ಪ್ರಸ್ತುತಪಡಿಸಿದಳು. ವಿದ್ಯಾರ್ಥಿ ಮಿಥುನ್ ಕವಿ ಕುವೆಂಪುರವರ ಛದ್ಮವೇಷವನ್ನು ಧರಿಸಿ ವಿಶ್ವಮಾನವ ಸಂದೇಶವನ್ನು ತಿಳಿಸಿ ಕವಿ ಕುವೆಂಪುರವರ ಜೀವನ ಚರಿತ್ರೆಯ ಬಗ್ಗೆ ಮನವರಿಕೆ ಮಾಡಿಕೊಟ್ಟನು. ನಂತರ ವಿಶ್ವಮಾನವ ದಿನಾಚರಣೆಯ ಪ್ರಯುಕ್ತವಾಗಿ ಕು. ಜತಿನ್ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರವನ್ನು ಬಿಡಿಸಿ ಮಕ್ಕಳಲ್ಲಿ ಕವಿ ಕುವೆಂಪುರವರ ಬಗ್ಗೆ ಮತ್ತಷ್ಟು ಜಾಗೃತಿಯನ್ನು ಮೂಡಿಸಿದನು. ಕೊನೆಯದಾಗಿ ರಾಷ್ಟ್ರಕವಿಯವರನ್ನು ಕುರಿತು ಮತ್ತಷ್ಟು ಮಾಹಿತಿಯನ್ನು ದೃಶ್ಯ ಪ್ರದರ್ಶನವನ್ನು ತೋರಿಸಲಾಯಿತು.