A Mind-blowing Day Trip

Bengaluru, July 10-11: A day trip was planned for the children of Rashtrotthana Vidya Kendra – Somanahalli. On July 10th, the children of 1st grade were taken to the ISKCON temple near Vasantapur. The children had darshan of Lord Radhakrishna, Jagannath, Baladeva, Subhadra, Sudarshana, Narasimha, Raja Govinda, Raja Lakshmi Padmavati, Lakshmi Narasimha, and Hanuman in the temple. Students chanted the ‘Hare Rama Hare Krishna’ mantra. Children participated in game activities.On July 11th, 2nd, 3rd and 4th class children were taken to the ISKCON temple herein Mahalakshmi Layout. The children had a glimpse of Lord Radhakrishna, Govinda, Rajalakshmi and chanted Krashna Mantra and danced to Lord Krishna in the temple hall. And watched a short film of Sri Krishna.

ಮನಸ್ಸನ್ನು ಮುದಗೊಳಿಸಿದ ದಿನದ ಪ್ರವಾಸ
ಬೆಂಗಳೂರು, ಜುಲೈ 10-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಸೋಮನಹಳ್ಳಿಯಲ್ಲಿ ಮಕ್ಕಳಿಗಾಗಿ ಒಂದು ದಿನದ ಪ್ರವಾಸವನ್ನು ಯೋಜಿಸಲಾಗಿತ್ತು. 1ನೇ ತರಗತಿಯ ಮಕ್ಕಳನ್ನು ಜುಲೈ 10ರಂದು ವಸಂತಪುರದ ಬಳಿ ಇರುವ ಇಸ್ಕಾನ್ ದೇವಾಲಯಕ್ಕೆ ಕರೆದೊಯ್ಯಲಾಯಿತು. ಮಕ್ಕಳು ದೇವಸ್ಥಾನದಲ್ಲಿ ರಾಧಾಕೃಷ್ಣ, ಜಗನ್ನಾಥ, ಬಲದೇವ, ಸುಭದ್ರಾ, ಸುದರ್ಶನ, ನರಸಿಂಹ, ರಾಜ ಗೋವಿಂದ, ರಾಜಲಕ್ಷ್ಮಿ ಪದ್ಮಾವತಿ, ಲಕ್ಷ್ಮೀನರಸಿಂಹ, ಹಾಗೂ ಹನುಮಾನ್ ದೇವರ ದರ್ಶನವನ್ನು ಮಾಡಿಕೊಂಡರು. ಹರೇ ರಾಮ ಹರೇ ಕೃಷ್ಣ ಮಂತ್ರವನ್ನು ಜಪಿಸಿ ಮಕ್ಕಳು ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸಿದರು.2, 3 ಹಾಗೂ 4ನೇ ತರಗತಿಯ ಮಕ್ಕಳನ್ನು ಜುಲೈ 11ರಂದು ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಇಸ್ಕಾನ್ ದೇವಾಲಯಕ್ಕೆ ಕರೆದೊಯ್ಯಲಾಯಿತು. ಮಕ್ಕಳು ರಾಧಾಕೃಷ್ಣ, ಗೋವಿಂದ, ರಾಜಲಕ್ಷ್ಮಿ ದೇವರುಗಳ ದರ್ಶನವನ್ನು ಪಡೆಯುವುದರ ಜೊತೆಗೆ ದೇವಸ್ಥಾನದ ಸಭಾಂಗಣದಲ್ಲಿ ಕೃಷ್ಣನ ಜಪವನ್ನು ಜಪಿಸಿ, ನೃತ್ಯವನ್ನು ಮಾಡಿದರು. ಹಾಗೂ ಶ್ರೀ ಕೃಷ್ಣನ ಕಿರು ಚಿತ್ರವನ್ನು ವೀಕ್ಷಿಸಿದರು.

Scroll to Top