Bengaluru, Aug. 15: The 79th Independence Day was celebrated herein Rashtrotthana Vidya Kendra – Somanahalli. Sri Sharath Nambori arrived as the chief guest. On this occasion of Independence Day, the birth anniversary of the country’s famous freedom fighter Sangolli Rayanna and philosopher Sri Arvind Ghosh was also celebrated with enthusiasm. The students shared information about the life achievements of Arvind Ghosh and Sangolli Rayanna. Then the students demonstrated the important postures of yoga. By performing a short play called Halagali Bedaru, they taught the students about the patriotism of Halagali Bedaru. They performed a wonderful dance performance remembering Bharatambe. Then the main guest Sharath Nambori addressed the children and gave encouraging words. At the end, sweets were distributed to the students.
ಬೆಂಗಳೂರು, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಶರತ್ ನಂಬೋರಿ ಅವರು ಆಗಮಿಸಿದ್ದರು. ಸ್ವತಂತ್ರ ದಿನದ ಈ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಮತ್ತು ತತ್ವಜ್ಞಾನಿಯಾದ ಶ್ರೀ ಅರವಿಂದ್ ಘೋಷ್ ಅವರ ಜಯಂತಿಯನ್ನು ಕೂಡ ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳು ಅರವಿಂದ್ ಘೋಷ್ ಮತ್ತು ಸಂಗೊಳ್ಳಿ ರಾಯಣ್ಣ ಅವರ ಜೀವನ ಸಾಧನೆಯ ಕುರಿತು ಮಾಹಿತಿಯನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳು ಯೋಗಾಸನದ ಪ್ರಮುಖ ಭಂಗಿಗಳನ್ನು ಪ್ರದರ್ಶಿಸಿದರು. ಹಲಗಲಿ ಬೇಡರು ಎಂಬ ಕಿರು ನಾಟಕವನ್ನು ಪ್ರದರ್ಶಿಸುವುದರ ಮೂಲಕ ಹಲಗಲಿ ಬೇಡರ ದೇಶಭಕ್ತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಭಾರತಾಂಬೆಯನ್ನು ನೆನೆಯುತ್ತಾ ಅದ್ಭುತವಾದ ನೃತ್ಯ ಪ್ರದರ್ಶನವನ್ನು ಮಾಡಿದರು. ನಂತರ ಮುಖ್ಯವಾಗಿ ಅತಿಥಿಗಳಾದ ಶರತ್ ನಂಬೋರಿ ಮಕ್ಕಳನ್ನು ಉದ್ದೇಶಿಸಿ ಪ್ರೋತ್ಸಾಹದಾಯಕ ನುಡಿಗಳನ್ನು ಹೇಳಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.