Bengaluru, Dec. 9: As part of the field trip herein Rashtrotthana Vidya Kendra – Somanahalli, a field trip was organized for classes 5 and 6 to Rashtrotthana Parishad Goshala, Mudenahalli and Kalhalli temple and for classes 3 and 4 to Cubbon Park. The staff of Rashtrotthana Parishad Goshala warmly welcomed the children of classes 5 and 6 and explained the role of Goshala in protecting domestic livestock and supporting sustainable agriculture. The students observed the daily routine of the cows, including feeding, grooming and milking the cows. They explained how the Goshala contributes to natural agriculture by providing manure and biogas and explained the importance of sustainable practices.The students cleaned the Goshala and said Jai Gomata. They toured the field in the Goshala tractor. Children of classes 3 and 4 visited Cubbon Park, located in the heart of Bengaluru. While wandering around Cubbon Park, the children observed various types of flowers and trees, including Rain trees, Gulmohar, and Bamboo groves.
ಬೆಂಗಳೂರು, ಡಿ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ ಕ್ಷೇತ್ರಪ್ರವಾಸದ ನಿಮಿತ್ತ 5 ಮತ್ತು 6ನೇ ವರ್ಗದವರಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆ, ಮುದೇನಹಳ್ಳಿ ಮತ್ತು ಕಲ್ಹಳ್ಳಿ ದೇವಾಲಯಕ್ಕೆ ಹಾಗೂ 3 ಮತ್ತು 4ನೇ ವರ್ಗದವರಿಗಾಗಿ ಕಬ್ಬನ್ ಪಾರ್ಕ್ ಪ್ರವಾಸವನ್ನು ಏರ್ಪಡಿಸಲಾಗಿತ್ತು.
5 ಮತ್ತು 6ನೇ ತರಗತಿಯ ಮಕ್ಕಳನ್ನು ರಾಷ್ಟ್ರೋತ್ಥಾನ ಪರಿಷತ್ತಿನ ಗೋಶಾಲೆಯ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಸ್ವಾಗತಿಸಿ, ದೇಶೀಯ ಜಾನುವಾರುಗಳನ್ನು ಸಂರಕ್ಷಿಸುವಲ್ಲಿ ಹಾಗೂ ಸುಸ್ಥಿರ ಕೃಷಿಗೆ ಬೆಂಬಲ ನೀಡುವಲ್ಲಿ ಗೋಶಾಲೆಗಳ ಪಾತ್ರವನ್ನು ವಿವರಿಸಿದರು. ಹಸುಗಳ ಆಹಾರ, ಸ್ವಚ್ಛತೆ ಹಾಗೂ ಹಾಲು ಕರೆಯುವುದು ಸೇರಿದಂತೆ ಹಸುಗಳ ದೈನಂದಿನ ದಿನಚರಿಯನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಗೊಬ್ಬರ ಮತ್ತು ಜೈವಿಕ ಅನಿಲವನ್ನು ಒದಗಿಸುವ ಮೂಲಕ ನೈಸರ್ಗಿಕ ಕೃಷಿಗೆ ಗೋಶಾಲೆ ಹೇಗೆ ತನ್ನ ಕೊಡುಗೆಯನ್ನು ನೀಡುತ್ತಿದೆ ಎನ್ನುವುದನ್ನು ವಿವರಿಸಿ, ಸುಸ್ಥಿರ ಅಭ್ಯಾಸಗಳ ಮಹತ್ತ್ವದ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಗೋಶಾಲೆಯನ್ನು ಸ್ವಚ್ಛಗೊಳಿಸಿ ಜೈಗೋಮಾತಾ ಎಂದರು. ಗೋಶಾಲೆಯ ಟ್ರ್ಯಾಕ್ಟರ್ ನಲ್ಲಿ ಕ್ಷೇತ್ರವನ್ನೆಲ್ಲ ಸುತ್ತಾಡಿದರು. 3 ಮತ್ತು 4ನೇ ತರಗತಿಯ ಮಕ್ಕಳು ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನಪಾರ್ಕ್ ಗೆ ಭೇಟಿ ನೀಡಿದರು. ಕಬ್ಬನ್ ಪಾರ್ಕ ಸುತ್ತಾಡುತ್ತ ಮಕ್ಕಳು ಮಳೆ ಮರಗಳು, ಗುಲ್ಮೊಹರ್, ಬಿದಿರಿನ ಮೇಳೆಗಳನ್ನೊಳಗೊಂಡು ವಿವಿಧಬಗೆಯ ಹೂವುಗಳು, ಮರಗಿಡಗಳನ್ನು ವೀಕ್ಷಿಸಿದರು.