Vegetables Day Celebration in RVK – Somanahalli

Bengaluru, Nov. 26: Students of Gokulam celebrated Vegetables Day herein Rashtrotthana Vidya Kendra – Somanahalli. Under the theme ‘Vegetable Supermarket’, all the vegetables were displayed with their names on the label. U-KG children performed a skit on the importance of eating vegetables. P-KG children sang the rhyme “Beke Beke Tarakari”. LKG students sang the rhyme “Tomatoes Are Red”. Students participated in an interactive group activity on Vegetable Dubbing, where they did a group activity of identifying and matching different vegetables. The ‘Carrot Photo Corner’ was decorated using the carrot theme; children took their photos around it. A group photo of all the students, teachers and the Principal of Gokulam was taken.

ಬೆಂಗಳೂರು, ನ. 26: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಸೋಮನಹಳ್ಳಿಯಲ್ಲಿ ಗೋಕುಲಂನ ವಿದ್ಯಾರ್ಥಿಗಳು ತರಕಾರಿಗಳ ದಿನವನ್ನು ಆಚರಿಸಿದರು. ‘ತರಕಾರಿ ಸೂಪರ್ ಮಾರ್ಕೆಟ್’ ಎನ್ನುವ ಥೀಮ್ ಅಡಿಯಲ್ಲಿ ಎಲ್ಲಾ ತರಕಾರಿಗಳನ್ನೂ ಅದರ ಹೆಸರಿನ ಲೇಬಲ್ ನೊಂದಿಗೆ ಪ್ರದರ್ಶಿಸಲಾಯಿತು. ಯು-ಕೆಜಿ ಮಕ್ಕಳು ತರಕಾರಿಯನ್ನು ತಿನ್ನಬೇಕಾದ ಮಹತ್ತ್ವವನ್ನು ಹೇಳುವ ಕಿರುನಾಟಕವನ್ನು ಪ್ರದರ್ಶಿಸಿದರು. ಪ್ರಿ-ಕೆಜಿ ಮಕ್ಕಳು “ಬೇಕೆ ಬೇಕೆ ತರಕಾರಿ” ಪ್ರಾಸವನ್ನು ಹಾಡಿದರು. ಎಲ್ ಕೆಜಿ ವಿದ್ಯಾರ್ಥಿಗಳು “ಟೊಮೆಟೋಸ್ ಆರ್ ರೆಡ್” ಎನ್ನುವ ಪ್ರಾಸವನ್ನು ಹಾಡಿದರು. ವಿದ್ಯಾರ್ಥಿಗಳು ತರಕಾರಿ ಡಬ್ಬಿಂಗ್‌ನ ಸಂವಾದಾತ್ಮಕ ಗುಂಪು ಚಟುವಟಿಕೆಯಲ್ಲಿ ಭಾಗವಹಿಸಿದರು; ಅಲ್ಲಿ ಅವರು ವಿವಿಧ ತರಕಾರಿಗಳನ್ನು ಗುರುತಿಸಿ ಹೊಂದಿಸುವ ಗುಂಪು ಚಟುವಟಿಕೆಯನ್ನು ಮಾಡಿದರು. ‘ಕ್ಯಾರೆಟ್ ಫೋಟೊ ಕಾರ್ನರ್’ನಲ್ಲಿ ಕ್ಯಾರೆಟ್ ಥೀಮ್ ಬಳಸಿ ಅಲಂಕಾರ ಮಾಡಲಾಗಿತ್ತು; ಮಕ್ಕಳು ಅದರ ಸುತ್ತ ತಮ್ಮ ಫೋಟೊ ತೆಗೆದುಕೊಂಡರು. ಗೋಕುಲಂನ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಧಾನಾಚಾರ್ಯರ ಗುಂಪು ಫೋಟೋವನ್ನು ತೆಗೆಯಲಾಯಿತು.

Scroll to Top