Bengaluru, Aug 15: 78th Independence Day and Sangollirayanna Jayanti, Maharshi Aurobindo Jayanti were celebrated herein Rashtrotthana Vidya Kendra – Somanahalli. Sri Umapati, a retired captain of the 821st Light Regiment of the Indian Army, graced the program.Program was started by Deeparchane and Pushprchane by Dignitaries. The flag was hoisted and the national anthem was sung.Sri Umapati accompanied by Vice Pradhanacharya Banashankari and Pradhanacharya Somanahalli watched the troupe. The chief guest received the salute of the students and spoke words of encouragement. The program started with a Patha Sanchalana conducted by school prmukhas and channel pramukhas.
Dressed in uniform, the students marched to the beat of the school band.On the occasion of Sangolli Rayanna Jayanti and Maharshi Aurobindo Jayanti, students shared their thoughts about them. School children sang a patriotic chorus. Children performed with dumbbells. The Har Ghar Tiranga song echoed in the atmosphere as the students tapped their feet to the beat of the Har Ghar Tiranga song.The chief guests gave inspiring speeches. Cultural programs were performed by the children.Pradhanacharya spoke about the responsibility of the citizen and spread the message of Har Ghar Tiranga.
ಬೆಂಗಳೂರು, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಸೋಮನಹಳ್ಳಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಗೊಳ್ಳಿರಾಯಣ್ಣ ಜಯಂತಿ, ಮಹರ್ಷಿ ಅರವಿಂದರ ಜಯಂತಿಯನ್ನು ಆಚರಿಸಲಾಯಿತು. ಭಾರತೀಯ ಸೇನೆಯ 821ನೇ ಲೈಟ್ ರೆಜಿಮೆಂಟ್ ನ ನಿವೃತ್ತ ಕ್ಯಾಪ್ಟನ್ ಶ್ರೀ ಉಮಾಪತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗಣ್ಯರು ದೀಪಪ್ರಜ್ವಲಿಸಿ, ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧ್ವಜಾರೋಹಣ ಹಾಗೂ ರಾಷ್ಟ್ರಗೀತೆಯನ್ನು ಹಾಡಲಾಯಿತು.ಶ್ರೀ ಉಮಾಪತಿ ಅವರು ಉಪಪ್ರಧಾನಾಚಾರ್ಯರು ಬನಶಂಕರಿ, ಹಾಗೂ ಪ್ರಧನಾಚಾರ್ಯರು, ಸೋಮನಹಳ್ಳಿ ಇವರೊಡಗೂಡಿ ಟ್ರೂಪನ್ನು ವೀಕ್ಷಿಸಿದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳ ಸೆಲ್ಯೂಟನ್ನು ಸ್ವೀಕರಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.ಶಾಲಾ ಪ್ರಮುಖರು ಹಾಗೂ ವಾಹಿನಿಯ ಪ್ರಮುಖರು ನಡೆಸಿದ ಪಥ ಸಂಚಲನದಿಂದ ಕಾರ್ಯಕ್ರಮವು ಆರಂಭವಾಯಿತು.
ಶುಭ್ರಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಶಾಲಾ ಬ್ಯಾಂಡ್ ತಾಳದೊಂದಿಗೆ ಪಥಸಂಚಲನ ನಡೆಸಿದರು.ಇದೇ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಜಯಂತಿ ಹಾಗೂ ಮಹರ್ಷಿ ಅರವಿಂದರ ಜಯಂತಿಯ ಸಂದರ್ಭದಲ್ಲಿ ಅವರ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.ಶಾಲಾ ಮಕ್ಕಳು ದೇಶಭಕ್ತಿ ಸಮೂಹಗಾಯನವನ್ನು ಹಾಡಿದರು. ಮಕ್ಕಳು ಡಂಬೆಲ್ಸ್ ಪ್ರದರ್ಶಿಸಿದರು.ಹರ್ ಘರ್ ತಿರಂಗಾ ಹಾಡಿನ ತಾಳಕ್ಕೆ ವಿದ್ಯಾರ್ಥಿಗಳು ತಮ್ಮ ಪಾದಗಳನ್ನು ತಟ್ಟಿದಾಗ ಹರ್ ಘರ್ ತಿರಂಗಾ ಹಾಡು ವಾತಾವರಣದಲ್ಲಿ ಪ್ರತಿಧ್ವನಿಸಿತು.ಮುಖ್ಯ ಅತಿಥಿಗಳು ಸ್ಪೂರ್ತಿಯುತ ಮಾತುಗಳನ್ನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ಪ್ರದರ್ಶಿಸಿದರು. ಪ್ರಧಾನಾಚಾರ್ಯರು ನಾಗರಿಕನ ಜವಾಬ್ದಾರಿಯ ಬಗ್ಗೆ ಮಾತನಾಡಿ ಹರ್ ಘರ್ ತಿರಂಗಾ ಸಂದೇಶವನ್ನು ಹರಡಿದರು.